top of page
  • Writer's pictureDoubleClickMedia

ಅರಿವು ಸಾಲ ಯೋಜನೆ: ಅರ್ಜಿ ಆಹ್ವಾನ

ಮಂಗಳೂರು: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ, ನೀಟ್ ನಲ್ಲಿ (ಎಮ್.ಬಿ.ಬಿ.ಎಸ್/ಬಿ.ಡಿ.ಎಸ್/ಆಯು/ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್/ಬಿ.ಈ/ ಬಿ.ಟೆಕ್, ಫಾರ್ಮಸಿ, ಅಗ್ರಿಕಲ್ಚರಲ್ ವಿಜ್ಞಾನ, ವೆಟರ್ನರಿ ಮತ್ತು ಫಾರ್ಮ ವಿಜ್ಞಾನ) ಆಯ್ಕೆಯಾಗುವ ಬೌದ್ದ, ಕ್ರಿಶ್ಚಿಯನ್, ಜೈನ, ಮುಸ್ಲಿಂ, ಪಾರ್ಸಿ ಜನಾಂಗದ ವಿದ್ಯಾರ್ಥಿಗಳಿಗೆ ನಿಗಮದ ಅರಿವು ಸಾಲ ಯೋಜನೆಯಡಿ ಸಾಲ ನೀಡಲು ಅರ್ಜಿ ಆಹ್ವಾನಿಸಿದೆ.ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

ವಿದ್ಯಾರ್ಥಿಗಳು ನಿಗಮದ ವೆಬ್ ಸೈಟ್ http://kmdconline.karnataka.gov.in ಮೂಲಕ ಜುಲೈ 10ರೊಳಗೆ ಅರ್ಜಿ ಸಲ್ಲಿಸಬಹುದು.


ಕೆ.ಎಂ.ಡಿ.ಸಿ. ವೆಬ್‍ಸೈಟ್ ನಲ್ಲಿ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಇಂಡಿಮ್ನಿಟಿ ಬಾಂಡ್ ಹಾಗೂ ಇತರೆ ದಾಖಲಾತಿಗಳನ್ನು ಆನ್‍ಲೈನ್ ಸಲ್ಲಿಸಿ ಕೂಡಲೇ ನಗರದ ಪಾಂಡೇಶ್ವರದಲ್ಲಿರುವ ಮೌಲಾನಾ ಆಜಾದ್ ಭವನದ 2ನೇ ಮಹಡಿಯಲ್ಲಿರುವ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ)ದ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಬೇಕು.ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

  1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. 8 ಲಕ್ಷ ರೂ.ಗಳ ಮಿತಿಯಲ್ಲಿರಬೇಕು

  2. ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ನ ಜೆರಾಕ್ಸ್ ಪ್ರತಿ

  3. ಸಿ.ಇ.ಟಿ/ನೀಟ್ ಪರೀಕ್ಷೆ ಪ್ರವೇಶ ಪತ್ರ

  4. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಅಂಕ ಪಟ್ಟಿಯ ದೃಢೀಕೃತ ಪ್ರತಿ,

  5. 50 ರೂ.ಗಳ ಇ-ಸ್ಟ್ಯಾಂಪ್‍ನೊಂದಿಗೆ ಇಂಡೆಮ್ನಿಟಿ ಬಾಂಡ್

  6. ವಿದ್ಯಾರ್ಥಿ ಮತ್ತು ಪೋಷಕರ 2 ಭಾವಚಿತ್ರಗಳುComments


bottom of page