top of page
  • Writer's pictureDoubleClickMedia

ಮಂಗಳೂರು ವಿವಿ: NSS ಸಂಯೋಜನಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ


nss mangalore university poster

ಮಂಗಳೂರು,ಜು 07: ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿಯಾಗಿ ಮೂರು ವರ್ಷಗಳ ಅವಧಿಗೆ ನಿಯೋಜನೆಯಲ್ಲಿ ಕರ್ತವ್ಯ ನಿರ್ವಹಿಸಲು ವಿಶ್ವವಿದ್ಯಾನಿಲಯ ಹಾಗೂ ಸಂಯೋಜಿತ ಕಾಲೇಜುಗಳ ಅರ್ಹ ಅಧ್ಯಾಪಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು 2023ರ ಜು.26ರೊಳಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯಲ್ಲಿರುವ ಕುಲಸಚಿವರ ಕಚೇರಿಗೆ ಅರ್ಜಿ ಸಲ್ಲಿಸಬಹುದು.


ಹೆಚ್ಚಿನ ಮಾಹಿತಿ ಹಾಗೂ ನಿಗದಿತ ಅರ್ಜಿಗಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಅಂತರ್ಜಾಲ ವಿಳಾಸ www.mangaloreuniversity.ac.in ಅನ್ನು ಸಂಪರ್ಕಿಸಬಹುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



bottom of page