top of page
  • Writer's pictureDoubleClickMedia

ಏಷ್ಯನ್ ಕಬಡ್ಡಿ : ಎಂಟನೇ ಬಾರಿ ಚಾಂಪಿಯನ್​ಶಿಪ್ ಗೆದ್ದ ಭಾರತ


Asian Kabaddi Championship 2023 Final

ಸೌತ್ ಕೊರಿಯಾದಲ್ಲಿ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023ರ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಭಾರತ ಕಬಡ್ಡಿ ತಂಡ 32- 42 ಅಂತರದಿಂದ ಸೋಲಿಸಿ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ನಡೆದಿರುವ 11 ಆವೃತ್ತಿಗಳಲ್ಲಿ ಭಾರತ ಎಂಟನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ.


ಹಾಲಿ ಚಾಂಪಿಯನ್‌ ಆಗಿದ್ದ ಭಾರತ ತನ್ನ ಪ್ರತಿಷ್ಠೆಗೆ ತಕ್ಕಂತೆ ಪ್ರದರ್ಶನ ನೀಡುವ ಮೂಲಕ ಇರಾನ್‌ ತಂಡವನ್ನು ಮಣಿಸಿ ಗೆಲುವಿನ ನಗೆ ಬೀರಿತು. ಇನ್ನು ಪವನ್ ಸೆಹ್ರಾವತ್ ನೇತೃತ್ವದಲ್ಲಿ ಚಾಂಪಿಯನ್​ಶಿಪ್​ಗೆ ಎಂಟ್ರಿಕೊಟ್ಟಿದ ಭಾರತ ಆಡಿದ 6 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋಲನ್ನು ಕಂಡಿರಲಿಲ್ಲ.


ಜೂನ್‌ 27ರಂದು ನಡೆದ ಟೂರ್ನಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ, ಆತಿಥೇಯ ದಕ್ಷಿಣ ಕೊರಿಯಾ ತಂಡವನ್ನು 76-13 ಅಂಕಗಳಿಂದ ಹೀನಾಯವಾಗಿ ಸೋಲಿಸಿತ್ತು. ಬಳಿಕ ತನ್ನ ಎರಡನೇ ಪಂದ್ಯದಲ್ಲೂ ಚೈನೀಸ್‌ ತೈಪೆ ಎದುರು 53-19 ಅಂಕಗಳ ಜಯ ತನ್ನದಾಗಿಸಿಕೊಂಡಿತು. ಮೂರನೇ ಪಂದ್ಯದಲ್ಲಿಯೂ ಭಾರತದ ಭರ್ಜರಿ ಆಟ ಮುಂದುವರಿದು ಜಪಾನ್‌ ಎದುರು 62-17 ಅಂಕಗಳ ಗೆಲುವು ದೊರೆಯಿತು.


ಆ ಬಳಿಕ ಜೂನ್ 29 ರಂದು ಪಂದ್ಯಾವಳಿಯ ಪ್ರಮುಖ ಎದುರಾಳಿಯಾಗಿದ್ದ ಇರಾನ್ ತಂಡವನ್ನು 33-28 ಅಂಕದಲ್ಲಿ ಸೋಲಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಅಂತಿಮವಾಗಿ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಹಾಂಗ್​ ಕಾಂಗ್ ತಂಡವನ್ನು 64- 20 ರಿಂದ ಸೋಲಿಸಿದ್ದ ಭಾರತ ಅಜೇಯವಾಗಿ ಫೈನಲ್​ಗೆ ಎಂಟ್ರಿಕೊಟ್ಟಿತ್ತು.


ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು 1980 ರಲ್ಲಿ ಪ್ರಾರಂಭಿಸಲಾಯಿತು. ಈ ಪಂದ್ಯಾವಳಿಯಲ್ಲಿ ಏಷ್ಯಾ ಖಂಡದ ವಿವಿಧ ದೇಶಗಳು ಭಾಗವಹಿಸುತ್ತವೆ. ಇದುವರೆಗೆ ಈ ಚಾಂಪಿಯನ್​ಶಿಪ್​ನಲ್ಲಿ 11 ಆವೃತ್ತಿಗಳು ನಡೆದಿದ್ದು, ಇದರಲ್ಲಿ ಏಳು ಬಾರಿ ಭಾರತ ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಬರೆದಿದೆ.


Comments


bottom of page