top of page
  • Writer's pictureDoubleClickMedia

ಕೇರಳದ ಮಾಲ್​ನ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಹೋಗಿ ಸಿಕ್ಕಿಬಿದ್ದ ಟೆಕ್ಕಿ


Kerala

ಕೊಚ್ಚಿ ಆಗಸ್ಟ್‌ 18: ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್​ ಮಾಡಿರುವ ಘಟನೆ ಕೇರಳದಲ್ಲಿ ಕೊಚ್ಚಿಯಲ್ಲಿರುವ ಲುಲುಮಾಲ್​​ನಲ್ಲಿ ಈ ಘಟನೆ ನಡೆದಿದೆ. ಟೆಕ್ಕಿಯೊಬ್ಬ ಬುರ್ಖಾ ಧರಿಸಿ ಶೌಚಾಲಯಕ್ಕೆ ಪ್ರವೇಸಿ ಕೃತ್ಯ ಎಸಗಿದ್ದಾನೆ.ಐಟಿ ಉದ್ಯೋಗಿ ಅಭಿಮನ್ಯು(23) ಮಹಿಳೆಯ ಸೋಗಿನಲ್ಲಿ ಬುರ್ಖಾ ಧರಿಸಿ ಲುಲುಮಾಲ್​ಗೆ ಬಂದಿದ್ದ, ಈ ವೇಳೆ ಮಹಿಳೆಯರ ಶೌಚಾಯಲಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.


ವಾಶ್ ರೂಂನಲ್ಲಿ ಸಣ್ಣ ರಟ್ಟಿನ ಪೆಟ್ಟಿಗೆಯಲ್ಲಿ ಮೊಬೈಲ್​ ಇಟ್ಟಿದ್ದ ಆರೋಪಿ, ಸಣ್ಣ ರಂದ್ರ ಕೊರೆದು ವಿಡಿಯೋ ರೆಕಾರ್ಡ್ ಆನ್ ಮಾಡಿದ್ದ. ಬಳಿಕ ಹೊರಗೆ ಬಂದು ವಾಶ್ ರೂಂನ ಮುಖ್ಯ ಬಾಗಿಲಿನ ಮುಂದೆ ನಿಂತಿದ್ದ, ಇದರಿಂದ ಆತನ ವರ್ತನೆಯಲ್ಲಿ ಅನುಮಾನ ಮೂಡಿದ್ದು, ಮಾಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆರೋಪಿಯಿಂದ ಬುರ್ಖಾ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ವಿರುದ್ಧ ಐಪಿಎಸ್ ಸೆಕ್ಷನ್ 354 (ಸಿ), 419 ಮತ್ತು 66 ಇ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯುವಕ ಇನ್ಫೋಪಾರ್ಕ್‌ನ ಪ್ರಮುಖ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
Commentaires


bottom of page