DoubleClickMedia
ದ.ಕ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿ ಬಿ ರಿಷ್ಯಂತ್ ನೇಮಕ

ಮಂಗಳೂರು, ಜೂನ್ 20: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿ ಬಿ ರಿಷ್ಯಂತ್ ಅವರನ್ನು ನೇಮಕ ಮಾಡಲಾಗಿದೆ.
ಇದಕ್ಕೂ ಮುನ್ನ ಇವರನ್ನು ವೈದ್ಯಕೀಯ ರಜೆಯಲ್ಲಿದ್ದ ಡಾ.ವಿಕ್ರಮ್ ಅಮಟೆ ಅವರ ಬದಲಿಗೆ ಇಲ್ಲಿನ ಉಸ್ತುವಾರಿ ಎಸ್ಪಿಯಾಗಿ ನೇಮಿಸಲಾಗಿತ್ತು. ಇದೀಗ ರಾಜ್ಯಾದ್ಯಂತ ವರ್ಗಾವಣೆಗೊಂಡಿರುವ 15 ಐಪಿಎಸ್ ಅಧಿಕಾರಿಗಳೊಂದಿಗೆ ದಕ್ಷಿಣ ಕನ್ನಡ ಎಸ್ಪಿಯಾಗಿ ರಿಷ್ಯಂತ್ ನೇಮಕಗೊಂಡಿದ್ದಾರೆ.
2013ರ ಐಪಿಎಸ್ ಬ್ಯಾಚ್ ಅಧಿಕಾರಿಯಾಗಿರುವ ರಿಷ್ಯಂತ್ ಈ ಹಿಂದೆ ದಾವಣಗೆರೆ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು. ಚುನಾವಣೆಗೂ ಮುನ್ನ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ದಕ್ಷಿಣ ಕನ್ನಡ, ಮೈಸೂರು ಮತ್ತು ಬಾಗಲಕೋಟೆಯಲ್ಲಿ ಎಎಸ್ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.