top of page
  • Writer's pictureDoubleClickMedia

ಯುದ್ದ ನೌಕೆ 'ಐಎನ್‌ಎಸ್ ವಿಕ್ರಾಂತ್' ನಲ್ಲಿ ನಾವಿಕನ ಮೃತದೇಹ ಪತ್ತೆ


INS Vikrant

ಕೊಚ್ಚಿ, ಜು 27: ಭಾರತೀಯ ನೌಕಾಪಡೆಯ 19 ವರ್ಷದ ನಾವಿಕನೊಬ್ಬನ ಮೃತದೇಹ ಗುರುವಾರ ಮುಂಜಾನೆ ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೌಕೆಯನ್ನು ಕೊಚ್ಚಿ ಕರಾವಳಿಯಲ್ಲಿ ನಿಲ್ಲಿಸಲಾಗಿದೆ.


ನಾವಿಕನು ಮೃತ ದೇಹ ಯುದ್ಧನೌಕೆಯ ಕಂಪಾರ್ಟ್‌ಮೆಂಟ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣವೆಂದು ತೋರುತ್ತಿದ್ದರೂ ಸಹಿತ ಘಟನೆಯ ಕುರಿತು ಶಾಸನಬದ್ಧ ತನಿಖಾ ಮಂಡಳಿಗೆ ಆದೇಶಿಸಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಿವಾಹಿತ ನಾವಿಕ ಬಿಹಾರದ ಮುಜಾಫರ್‌ಪುರಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

bottom of page