top of page
  • Writer's pictureDoubleClickMedia

ದುಬೈಗೆ‌ ತೆರಳುತ್ತಿದ್ದವನ ಬಳಿ‌‌ ಕೋಟ್ಯಾಂತರ‌ ಬೆಲೆ‌ ಬಾಳುವ ವಜ್ರಗಳು;ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ


ಮಂಗಳೂರು, ಮೇ 28: ಮೇ 25 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (MIA) ಸಿಐಎಸ್‌ಎಫ್ ಸಿಬ್ಬಂದಿಯು ಭದ್ರತಾ ತಪಾಸಣೆಯ ವೇಳೆ ದುಬೈಗೆ ಹೊರಟಿದ್ದ ಪ್ರಯಾಣಿಕನಿಂದ 1.69 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ವಶ ಪಡಿಸಿಕೊಂಡಿದ್ದಾರೆ.


ವ್ಯಕ್ತಿಯು ತನ್ನ ಒಳ ಉಡುಪುಗಳಲ್ಲಿ ಎರಡು ಚೀಲಗಳನ್ನು ಬಚ್ಚಿಟ್ಟುಕೊಂಡಿರುವುದು ಕಂಡುಬಂದಿದ್ದು, ಆತನನ್ನು ತಕ್ಷಣವೇ ಹೆಚ್ಚಿನ ತನಿಖೆಗಾಗಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಪರೀಕ್ಷೆಯ ನಂತರ, ಎರಡು ಚೀಲಗಳಲ್ಲಿ ವಿವಿಧ ಗಾತ್ರದ ವಜ್ರಗಳಿಂದ ತುಂಬಿದ ಒಟ್ಟು 13 ಸಣ್ಣ ಪ್ಯಾಕೆಟ್‌ಗಳು ಇರುವುದು ಪತ್ತೆಯಾಗಿದೆ. ವಜ್ರಗಳ ಒಟ್ಟು ತೂಕ 306.21 ಕ್ಯಾರೆಟ್ ಆಗಿದ್ದು, ಇದರ ಮೌಲ್ಯ ಸುಮಾರು ರೂ. 1.69 ಕೋಟಿ‌ ಎಂದು ಅಂದಾಜಿಸಲಾಗಿದೆ.


ಪ್ರಯಾಣಿಕ ಕಾಸರಗೋಡು ಮೂಲದವನಾಗಿದ್ದು ಆತನನ್ನು ತಕ್ಷಣವೇ ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

bottom of page