top of page
  • Writer's pictureDoubleClickMedia

ನೈತಿಕ ಪೋಲಿಸ್ ಗಿರಿ ಆರೋಪ : ಬಜರಂಗದಳದ ಮೂವರು ಸಕ್ರಿಯ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ


Mangalore Bajarangadhala

ಮಂಗಳೂರು ಜು. 21: ಮಂಗಳೂರು ನಗರದ ಸುಲ್ತಾನ್ ಜ್ಯುವೆಲರಿ ಹಾಗೂ ಹೋಳಿ ಆಚರಣೆ ವೇಳೆ ನಡೆದ ನೈತಿಕ ಪೊಲೀಸ್​ಗಿರಿಯಲ್ಲಿ ಭಾಗಿಯಾಗಿದ್ದ ಬಜರಂಗದಳದ ಮೂವರು ಸಕ್ರಿಯ ಕಾರ್ಯಕರ್ತರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ​ ಇಲಾಖೆ ನಿರ್ಧರಿಸಿದೆ.ಆ್ಯಂಟಿ ಕಮ್ಯೂನಲ್ ವಿಂಗ್ ರಚಿಸಿ ನೈತಿಕ ಪೋಲಿಸ್ ಗಿರಿಗೆ ಕಡಿವಾಣ ಹಾಕೋದಾಗಿ ಗೃಹ ಸಚಿವ ಜಿ‌.ಪರಮೇಶ್ವರ್ ಹೇಳಿಕೆ ನೀಡಿದ ತಿಂಗಳೊಳಗೆ ಮೂವರು ಬಜರಂಗದಳದ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ ನಡೆದಿದೆ.


ಇದೀಗ ಈ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು? ಎಂದು ಕಾರಣ ಕೇಳಿ ನೋಟಿಸ್​ ನೀಡಿದೆ. ಇಂದು (ಜು.21) ಮೂವರು ಬಜರಂಗದಳ ಕಾರ್ಯಕರ್ತರಿಗೆ ಕಾ‌ನೂನು ಸುವ್ಯವಸ್ಥೆ ಖಾತ್ರಿ ಪಡಿಸಲು ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಬಳಿಕ ಅಧಿಕೃತವಾಗಿ ಒಂದು ವರ್ಷ ಕಾಲ ಗಡಿಪಾರು ಮಾಡುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯ ಠಾಣೆಗಳ ಇನ್ಸ್‌ಪೆಕ್ಟರ್​ಗಳಿಂದ ಗಡಿಪಾರಿಗೆ ವರದಿಯನ್ನು ಕೇಳಲಾಗಿದೆ.ಸಮಾಜದಲ್ಲಿ ಈ ಮೂವರ ವಿರುದ್ಧ ದೂರು ನೀಡುವವರಿಗೆ ಭಯವನ್ನು ಉಂಟು ಮಾಡುವಂತಹ ಅಪರಾಧ ಶಕ್ತಿ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡಬಲ್ಲ ಅಪಾಯಕಾರಿ ವ್ಯಕ್ತಿಯಾಗುವ ಮತ್ತು ಸಮಾಜಕ್ಕೆ ಗಂಡಾಂತರಕಾರಿಯಾಗುವ ಸಾದ್ಯತೆ ಇರುತ್ತದೆ. ಆದ್ದರಿಂದ ಸಮಾಜದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಮೂವರನ್ನು ಕಾನೂನಿನ ಚೌಕಟ್ಟಿನೊಳಗೆ ಹದ್ದು ಬಸ್ತಿನಲ್ಲಿಡಬೇಕಾಗಿರುವುದರಿಂದ ಈ ಮೂವರನ್ನು ಅಪರಾಧಿಕ ಚಟುವಟಿಕೆಗಳ ತಾಣದಿಂದ ಮತ್ತು ಅಪರಾಧ ಹಿನ್ನೆಲೆಯುಳ್ಳ ಇವರ ಸಹಚರರಿಂದ ದೂರ ಇಟ್ಟು ಆರೋಪಿತರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಗಡಿಪಾರು ಮಾಡುವುದು ಸೂಕ್ತ ಹಾಗೂ ಅನಿವಾರ್ಯವಾಗಿರುತ್ತದೆ ಎಂದು ಕಂಕನಾಡಿ ಠಾಣೆಯ ಇನ್ಸ್‌ಪೆಕ್ಟರ್ ಅವರು ಗಣೇಶ್ ಅತ್ತಾವರ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅಂಶುಕುಮಾರ್ ಅವರಿಗೆ ವರದಿ ಸಲ್ಲಿಸಿದ್ದಾರೆ.
Comments


bottom of page