top of page
  • Writer's pictureDoubleClickMedia

ರಾಜ್ಯದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ತೃತೀಯಲಿಂಗಿ


Ballari

ಬಳ್ಳಾರಿ, ಆಗಸ್ಟ್‌ 8: ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದಲ್ಲಿಯೇ ಮೊದಲ ಬಾರಿ ಮಂಗಳಮುಖಿಯೊಬ್ಬರು ಆಯ್ಕೆಯಾಗಿದ್ದಾರೆ.ಚೋರನೂರು ಗ್ರಾಮ ಪಂಚಾಯ್ತಿಗೆ ಅಧ್ಯಕ್ಷರಾಗಿ ಅಂಜೀನಮ್ಮ ತಿಪ್ಪೇಸ್ವಾಮಿ ಇವರು ಚೋರನೂರು ಗ್ರಾಮದ ಅನುಸೂಚಿತ ಜಾತಿ ಮೀಸಲಾತಿಯಡಿಯಲ್ಲಿ 2ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದ್ದಾರೆ.


ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಗಂಡ ಬಿ ಹನುಮಂತಪ್ಪ ಅನುಸೂಚಿತ ಪಂಗಡ ಮಹಿಳಾ ಮಿಸಲಾತಿಯಡಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಟ್ಟು ಮೂವರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದರು, ಆದರೆ ಹಿರಿಯರು ಮತ್ತು ಗ್ರಾಮಸ್ಥರ ಒತ್ತಾಯಕ್ಕೆ ಹಾಗೂ ಅವರಿಗೂ ಒಂದು ಅವಕಾಶ ನೀಡಬೇಕು ಎಂದು ನಿರ್ಧರಿಸಿ, ಸಿ.ಆಂಜಿನಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಏಳು ಗ್ರಾಮಗಳು ಒಳಗೊಂಡಿದೆ.bottom of page