top of page
  • Writer's pictureDoubleClickMedia

ಚೀನಾದ ರೆಸ್ಟೋರೆಂಟ್​ನಲ್ಲಿ ಅನಿಲ ಸೋರಿಕೆಯಿಂದ ಭಾರಿ ಸ್ಫೋಟ: 31 ಮಂದಿ ಸಾವು


Chinese restaurant

ಚೀನಾದ ಯಿಂಚುವಾನ್ ನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಅನಿಲ ಸೋರಿಕೆಯಿಂದಾಗಿ ಭಾರಿ ಸ್ಫೋಟ ಉಂಟಾಗಿದ್ದು, ಕನಿಷ್ಠ 31 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿಏಳು ಜನರಿಗೆ ಗಾಯಗಳಾಗಿದೆ. ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರಿಗೆ ಗಾಜಿನಿಂದ ಗೀರುಗಳು ಉಂಟಾಗಿದೆ ಎಂದು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.ಚೀನಾದ ರಾಜಧಾನಿಯ ಯಿಂಚುವಾನ್ ನಿಂಗ್‌ಕ್ಸಿಯಾ ನಗರದ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಬುಧವಾರ ರಾತ್ರಿ 8.40ರ ಸುಮಾರಿಗೆ ಅನಿಲ ಸೋರಿಕೆಯಾಗಿ ಸ್ಪೋಟ ಸಂಭವಿಸಿದೆ ಎಂದು ಕ್ಸಿನ್ಹುವಾ ವರದಿಯಲ್ಲಿ ತಿಳಿಸಿದೆ.


ರೆಸ್ಟೋರೆಂಟ್‌ನಲ್ಲಿನ ಲಿಕ್ವೆಫೀಡ್ ಪೆಟ್ರೋಲಿಯಂ ಗ್ಯಾಸ್ ಟ್ಯಾಂಕ್‌ನಿಂದ ಅನಿಲ ಸೋರಿಕೆಯಾಗಿದ್ದು ಈ ಘೋರ ದುರಂತಕ್ಕೆ ಮುಖ್ಯ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿರುವುದಾಗಿ ಕ್ಸಿನ್ಹುವಾ ತಿಳಿಸಿದೆ.ಸ್ಫೋಟದಿಂದಾಗಿ ಸುತ್ತಮುತ್ತಲಿನ ಕಟ್ಟಡಗಳಿಗೆ ಭಾರೀ ಹಾನಿಯಾಗಿದೆ. ಸ್ಫೋಟದ ನಂತರ ಗಾಯಗೊಂಡವರ ರಕ್ಷಣೆ ಮತ್ತು ಚಿಕಿತ್ಸೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. 102 ರಕ್ಷಣಾ ಸಿಬ್ಬಂದಿ ಮತ್ತು 20 ವಾಹನಗಳು ಘಟನಾ ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ನಡೆಸಿರುವುದಾಗಿ ವರದಿಯಾಗಿದೆ.


ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ. ಪ್ರಮುಖ ಕೈಗಾರಿಕೆಗಳು ಮತ್ತು ವಲಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ವೃದ್ಧಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಒತ್ತಿ ಹೇಳಿದ್ದಾರೆ ಎಂದು ವಾಹಿನಿಯೊಂದು ವರದಿ ಮಾಡಿದೆ.Comments


bottom of page