top of page
  • Writer's pictureDoubleClickMedia

ಯೂಟ್ಯೂಬ್​ ನೋಡಿ ಪತ್ನಿಗೆ ಹೆರಿಗೆ ಮಾಡಿಸಲು ಪತಿ ಯತ್ನ, ಮಹಿಳೆ ಸಾವು


Pregnancy

ತಮಿಳುನಾಡು, ಆಗಸ್ಟ್‌ .25: ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಮಾಡಿಸಲು ಹೋಗಿ ಆಕೆ ಮನೆಯಲ್ಲಿಯೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.



ಮಾದೇಶ ಎಂಬುವವರ ಪತ್ನಿ ಲೋಕನಾಯಕಿ ಗರ್ಭಿಣಿಯಾಗಿದ್ದರು ಮನೆಯಲ್ಲಿಯೇ ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸುತ್ತೀನಿ ಎಂದು ಹೋಗಿ ಪತ್ನಿಯನ್ನೇ ಕಳೆದುಕೊಂಡಿದ್ದಾರೆ.



ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು, ಆತ ಯೂಟ್ಯೂಬ್ ಮೂಲಕ ಮನೆಯಲ್ಲಿಯೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಹೆರಿಗೆಯೂ ಆಗಿದೆ ಆದರೆ ಹೊಕ್ಕುಳ ಬಳ್ಳಿಯನ್ನು ಸರಿಯಾಗಿ ಕತ್ತರಿಸಲು ಸಾಧ್ಯವಾಗಲಿಲ್ಲ, ರಕ್ತಸ್ರಾವ ಉಂಟಾಗಿ ಮಹಿಳೆ ಮೃತಪಟ್ಟಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಪಿಎಚ್​ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.



ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಥಿಕಾ ಪೊಲೀಸರಿಗೆ ದೂರು ನೀಡಿದ್ದಾರೆ. ಮಾದೇಶ್ ಅವರ ವಿರುದ್ಧ 174 ಸೆಕ್ಷನ್​ನಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.



bottom of page