DoubleClickMedia
ನಾನೆಂದೂ ನಿನ್ನವ.. ಕೇವಲ ನಿನ್ನವ: ಸ್ವಂದನಾ ನೆನದು ಭಾವುಕ ಸಾಲುಗಳನ್ನು ಹೇಳಿದ ವಿಜಯ್ ರಾಘವೇಂದ್ರ

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ರಾಘವೇಂದ್ರ ನಿಧನರಾಗಿ ಎರಡು ವಾರ ಕಳೆಯುತ್ತ ಬಂತು. ಸ್ಪಂದನಾ ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಕುಟುಂಬದವರ ಬಳಿ ಇಂದಿಗೂ ಸಾಧ್ಯವಾಗುತ್ತಿಲ್ಲ.
ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ ಮತ್ತು ಕುಟುಂಬದ ಎಲ್ಲಾ ಸದಸ್ಯರು ದುಃಖದಲ್ಲಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಬಳಿಕ ವಿಜಯ್ ರಾಘವೇಂದ್ರ ಅವರು ಸೈಲೆಂಟ್ ಆಗಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಮೌನ ಮುರಿದ್ದಾರೆ. ಪತ್ನಿಯ ಬಗ್ಗೆ ಅವರು ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಸಾಲುಗನ್ನು ಬರೆದುಕೊಂಡಿದ್ದಾರೆ.
ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ
ಅಳತೆಗೆ ತಕ್ಕ ನುಡಿ.. ಬದುಕಿಗೆ ತಕ್ಕ ನಡೆ
ನಮಗೆಂದೇ ಮಿಡಿದ ನಿನ್ನ ಹೃದಯವ.. ನಿಲ್ಲದು ನಿನ್ನೊಂದಿಗಿನ ಕಲರವ
ನಾನೆಂದೂ ನಿನ್ನವ.. ಕೇವಲ ನಿನ್ನವ..
ಹೀಗೆ ವಿಜಯ್ ರಾಘವೇಂದ್ರ ಅವರು ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ. ಅವರ ಧ್ವನಿಯಲ್ಲಿ ನೋವು ಕಾಣಿಸಿದೆ.