top of page
  • Writer's pictureDoubleClickMedia

ಫ್ಲೋರಿಡಾ ಬೀಚ್ ನಲ್ಲಿ ಮಕ್ಕಳನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ ಭಾರತೀಯ ಟೆಕ್ಕಿ


florida beach

ತನ್ನ ಮಕ್ಕಳನ್ನು ರಕ್ಷಿಸುವ ವೇಳೆ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ದುರಂತವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಫ್ಲೋರಿಡಾದ ಬೀಚ್‌ನಲ್ಲಿ ನಡೆದಿದೆ. ಆಂಧ್ರಪ್ರದೇಶದ 42 ವರ್ಷ ವಯಸ್ಸಿನ ಪೊಟ್ಟಿ ವೆಂಕಟ ರಾಜೇಶ್ ಕುಮಾರ್ ಮೃತಪಟ್ಟವರು.


ರಾಜೇಶ್ ಯುಎಸ್ ನಲ್ಲಿ ಸ್ಟಾರ್ಟಪ್ ನಲ್ಲಿ ಉದ್ಯೋಗಿಯಾಗಿದ್ದು, ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಅಡ್ಡಂಕಿ ಮಂಡಲದವರಾಗಿದ್ದಾರೆ.

ರಾಜೇಶ್ ಮತ್ತು ಅವರ ಕುಟುಂಬ ಫ್ಲೋರಿಡಾದ ಜಾಕ್ಸನ್‌ವಿಲ್ಲೆ ಬೀಚ್‌ನಲ್ಲಿ ವಿಹರಿಸುತ್ತಿರುವಾಗ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ಆಟವಾಡುತ್ತಿದ್ದ ತನ್ನ ಮಕ್ಕಳು ಸಮುದ್ರಕ್ಕೆ ಹೋಗುತ್ತಿರುವುದನ್ನು ಗಮನಿಸಿದ ರಾಜೇಶ್ ಅವರ ಬಳಿ ಓಡಿದ್ದು, ತಮ್ಮ ಮಗನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಈ ಪ್ರಕ್ರಿಯೆಯಲ್ಲಿ, ದೈತ್ಯ ಅಲೆಯೊಂದು ಅವರನ್ನು ಎಳೆದುಕೊಂಡು ಹೋಗಿದೆ

ಸಮುದ್ರದಿಂದ ಹೊರತೆಗೆದ ತಕ್ಷಣವೇ ಅವರನ್ನು ಹೆಲಿಕಾಪ್ಟರ‍್ ಮೂಲಕ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯಕೀಯ ತಂಡದ ಪ್ರಯತ್ನಗಳ ನಡುವೆಯೂ ಅವರು ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಬೆಳಗಿನ ಜಾವ 4.30ರ ಸುಮಾರಿಗೆ ಮೃತಪಟ್ಟಿದ್ದಾರೆ.


ಶ್ವಾಸಕೋಶಕ್ಕೆ ನೀರು ನುಗ್ಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರ ಮಗ ಸದ್ಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.


bottom of page