DoubleClickMedia
ಶಿವಮೊಗ್ಗದಲ್ಲಿ ಎಟಿಎಂ ದರೋಡೆಗೆ ಜೆಸಿಬಿ ಕದ್ದು ತಂದ ಖದೀಮರು

ಶಿವಮೊಗ್ಗ, ಜುಲೈ 26: ಸಾಮಾನ್ಯ ಕಳ್ಳತನ ಮಾಡಲು ಕಳ್ಳ ಸದ್ದು ಮಾಡದೇ ಬಂದು ಕೆಲಸ ಮುಗಿಸುತ್ತಾನೆ. ಆದರೆ ಶಿವಮೊಗ್ಗ ಖತರ್ನಾಕ್ ಕಳ್ಳರು ಜೆಸಿಬಿಯನ್ನೇ ಕದ್ದು ತಂದು ಎಟಿಎಂ ಮೆಷಿನ್ ದರೋಡೆ ಮಾಡಲು ಮುಂದಾದ ಘಟನೆಯೊಂದು ನಡೆದಿದೆ.
ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿ ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ ನಡೆದಿದೆ. ಎಟಿಎಂ ದರೋಡೆಗೆ ಜೆಸಿಬಿಯನ್ನು ಕದ್ದು ತಂದಿದ್ದ ದುಷ್ಕರ್ಮಿಗಳು ಆಕ್ಸಿಸ್ ಬ್ಯಾಂಕಿನ ಎಟಿಎಂ ದರೋಡೆಗೆ ಯತ್ನಿಸಿದ್ದಾರೆ. ಆದರೆ ರಾತ್ರಿ ಗಸ್ತು ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಜೆಸಿಬಿ ವಶಕ್ಕೆ ಪಡೆದಿದ್ದು ಘಟನೆ ಕುರಿತು ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.