top of page
  • Writer's pictureDoubleClickMedia

ರಾಯಗಢದಲ್ಲಿ ಭೂಕುಸಿತ: ನಾಪತ್ತೆಯಾದ 57 ಜನರ ಶೋಧ ಕಾರ್ಯ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ


Landslide in Rayaga

ಮುಂಬೈ ಜು.24 : ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇಶಲವಾಡಿಯಲ್ಲಿ ಬುಧವಾರ ಸಂಭವಿಸಿದ ಭೂಕುಸಿತದಲ್ಲಿ ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತನ್ನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಭಾನುವಾರ ಸ್ಥಗಿತಗೊಳಿಸಿದೆ ಎಂದು ರಾಜ್ಯ ಸಚಿವ ಉದಯ್ ಸಾಮಂತ್ ತಿಳಿಸಿದ್ದಾರೆ.ರಕ್ಷಣಾ ಕಾರ್ಯಚರಣೆಯಲ್ಲಿ ಇಲ್ಲಿಯವರೆಗೆ 22 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ ಇನ್ನೂ 57 ಮಂದಿ ನಾಪತ್ತೆಯಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಆದ್ದರಿಂದ ಕಾಣೆಯಾದವರಿಗಾಗಿ ನಡೆಸುತಿದ್ದ ಶೋಧ ಕಾರ್ಯವನ್ನು ರಾಜ್ಯಸರ್ಕಾರ ಸ್ಥಗಿತಗೊಳಿಸಿದೆ.ಈ ಪ್ರದೇಶದಲ್ಲಿ ಒಟ್ಟು 48 ಕುಟುಂಬಗಳು ವಾಸವಾಗಿದ್ದು, 17 ಮನೆಗಳು ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದೆ. ರಾಯಗಢ ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿಯ ಪ್ರಕಾರ, 48 ಕುಟುಂಬಗಳ 229 ಜನರಲ್ಲಿ ಇಲ್ಲಿಯವರೆಗೆ 22 ಜನ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇನ್ನೂ 111 ಮಂದಿ ಸುರಕ್ಷಿತವಾಗಿದ್ದಾರೆ.Comments


bottom of page