top of page
  • Writer's pictureDoubleClickMedia

ಸಿಡಿಲು ಬಡಿತ: ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಮೆದುಳಿಗೆ ಹಾನಿ


student

ಹೂಸ್ಟನ್ ಜು.21: ಅಮೆರಿಕದ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿಗೆ ಸಿಡಿಲು ಬಡಿದು ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಎಂದು ವರದಿಯಾಗಿದೆ.ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ಓದುತ್ತಿದ್ದ ವಿದ್ಯಾರ್ಥಿನಿ ಸುಸ್ರೂಣ್ಯ ಕೋಡೂರು ಜುಲೈ 4 ನೇ ವಾರಾಂತ್ಯದಲ್ಲಿ ಸ್ಯಾನ್ ಜಸಿಂಟೋ ಸ್ಮಾರಕ ಉದ್ಯಾನವನದಲ್ಲಿ ತನ್ನ ಸ್ನೇಹಿತರೊಂದಿಗೆ ಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಿಡಿಲು ಬಡಿದು ಕೊಳಕ್ಕೆ ಬಿದ್ದಿದ್ದಾಳೆ. ಬಳಿಕ, ಹೃದಯ ಸ್ತಂಭನಕ್ಕೆ ಒಳಗಾಗಿದ್ದಳು. ಈಗ ಮೆದುಳು ಹಾನಿಗೊಳಗಾಗಿದೆ ಕುಟುಂಬ ಮೂಲವು ತಿಳಿಸಿದೆ.


ಆಕೆಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದು, ಕುಟುಂಬವು ವೈದ್ಯಕೀಯ ವೆಚ್ಚಗಳಿಗೆ ನೆರವು ಕೋರಿ GoFundMe ಅನ್ನು ರಚಿಸಿದೆ. ಆಕೆಯ ಸಾಮಾಜಿಕ ಮಾಧ್ಯಮ ಪುಟದಲ್ಲಿ, ಕುಟುಂಬವು ಸಹಾಯಕ್ಕಾಗಿ ಮನವಿ ಮಾಡಿದೆ.
bottom of page