DoubleClickMedia
ಈ ಮಾವಿನ ಹಣ್ಣಿನ ಬೆಲೆ ಕೆ.ಜಿ ಗೆ 2.75 ಲಕ್ಷ!
ಜೂನ್ 10, 2023:
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಅಂದಾಜು 2.75 ಲಕ್ಷ ರೂ.ಬೆಲೆಯಿರುವ ವಿಶ್ವದ ಅತ್ಯಂತ ದುಬಾರಿ ಮಾವು ಮಿಯಾಝಾಕಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆಯುತ್ತಿರುವ ಮಾವು ಉತ್ಸವದ 7 ನೇ ಆವೃತ್ತಿಯಲ್ಲಿ ಪ್ರದರ್ಶನಗೊಂಡಿದೆ. ಪಶ್ಚಿಮ ಬಂಗಾಳದ ಬಿರ್ಭುಮ್‌ನ ರೈತ ಶೌಕತ್ ಹುಸೇನ್ ಉತ್ಸವದಲ್ಲಿ ಭಾಗವಹಿಸಿ, 10 ಮಿಯಾಜಾಕಿ ಮಾವಿನ ಹಣ್ಣುಗಳನ್ನು ಪ್ರದರ್ಶಿಸಿದ್ದಾರೆ. ಉತ್ಸವವು ಜೂನ್ 9 ರಂದು ಪ್ರಾರಂಭವಾಗಿದ್ದು ಜೂನ್ 11 ರವರೆಗೆ ಮುಂದುವರಿಯುತ್ತದೆ. ಇದನ್ನು ಮಾಡೆಲ್ಲಾ ಕೇರ್‌ಟೇಕರ್ ಸೆಂಟರ್ ಮತ್ತು ಸ್ಕೂಲ್ (MCCS) ಅಸೋಸಿಯೇಶನ್ ಫಾರ್ ಕನ್ಸರ್ವೇಶನ್ ಮತ್ತು ಟೂರಿಸಂ (ACT) ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಉತ್ಸವದಲ್ಲಿ 262 ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುಗಳನ್ನು ಪ್ರದರ್ಶಿಸಲಾಗುತ್ತಿದೆ.

ಮೂಲತಃ ಜಪಾನ್‌ನ ಕ್ಯುಶು ಪ್ರಿಫೆಕ್ಚರ್‌ನಲ್ಲಿರುವ ಮಿಯಾಜಾಕಿ ನಗರದ ಮಿಯಾಜಾಕಿ ಮಾವು ಅದರ ವಿಶಿಷ್ಟ ನೋಟ ಮತ್ತು ಬಣ್ಣದಿಂದಾಗಿ 'ಸೂರ್ಯನ ಮೊಟ್ಟೆ' ಎಂದು ಕರೆಯಲ್ಪಡುತ್ತದೆ. ಈ ಮಾವಿನಹಣ್ಣುಗಳು ಸಾಮಾನ್ಯವಾಗಿ 350 ಗ್ರಾಂ ತೂಕವನ್ನು ಹೊಂದಿರುತ್ತವೆ ಮತ್ತು 15 ಶೇಖಡಕ್ಕಿಂತ ಹೆಚ್ಚಿನ ಸಕ್ಕರೆಯ ಅಂಶವನ್ನು ಹೊಂದಿರುತ್ತವೆ. ಮಿಯಾಝಾಕಿ ಮಾವುಗಳನ್ನು ಏಪ್ರಿಲ್ ಮತ್ತು ಆಗಸ್ಟ್ ನಡುವೆ ಬೆಳೆಯಲಾಗುತ್ತದೆ. ಇವುಗಳಲ್ಲಿ ಆಂಟಿ ಓಕ್ಸಿಡಂಟ್ ಸಮೃದ್ಧವಾಗಿದ್ದು, ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ದಣಿದ ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ ಮತ್ತು ಮಂದ ದೃಷ್ಟಿಯನ್ನು ತಡೆಯಲು ಸಹಾಯ ಮಾಡುತ್ತದೆ.
ಈ ಮಾವಿನ ರೂಪಾಂತರವನ್ನು ಭಾರತ, ಬಾಂಗ್ಲಾದೇಶ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌ನಲ್ಲಿಯೂ ಸಹ ಬೆಳೆಸಲಾಗುತ್ತದೆ. ಇತ್ತೀಚಿಗೆ ಕರ್ನಾಟಕದ ಕೊಪ್ಪಳದಲ್ಲೂ ಈ ಮಾವು ಪ್ರದರ್ಶನಗೊಂಡಿತ್ತು.