top of page
  • Writer's pictureDoubleClickMedia

ಪಿ.ಎಂ. ಮತ್ಸ್ಯ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ



ಮಂಗಳೂರು.ಆಗಸ್ಟ್‌ 21: ಮೀನುಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿವಿಧ ಕಾರ್ಯಕ್ರಮಗಳಿಗೆ ಮೀನುಗಾರರು, ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.



ಸಾಂಪ್ರದಾಯಿಕ ಮೀನುಗಾರರಿಗೆ ಹಳೆಯ ದೋಣೆಗಳ ಬದಲಿಗೆ ಹೊಸ ಎಫ್.ಆರ್.ಪಿ ದೋಣಿಗಳ ಖರೀದಿಗೆ ಸಹಾಯ, ಹೊಸ ಮೀನು ಕೃಷಿ ಕೊಳಗಳ ನಿರ್ಮಾಣ ಮತ್ತು ನಿರ್ವಹಣೆ, ಮೃದ್ವಂಗಿ ಕೃಷಿ, 50 ಸಾಮಥ್ರ್ಯದ ಮಂಜುಗಡ್ಡೆ ಸ್ಥಾವರ/ಶೈತ್ಯಾಗಾರ ನಿರ್ಮಾಣ, ಹಳೆಯ ಮಂಜುಗಡ್ಡೆ ಸ್ಥಾವರ ಶೈತ್ಯಾಗಾರದ ಆಧುನೀಕರಣ, ಶಾಖರೋಧಕ ವಾಹನ, ಶೀತಲೀಕೃತ ವಾಹನ ಹಾಗೂ ಮೀನಿನ ಮೌಲ್ಯವರ್ಧನ ಉದ್ಯಮ ಇತ್ಯಾದಿ ಯೋಜನೆಗಳಿಗೆ ಆಗಸ್ಟ್‌ 22ರೊಳಗೆ ಅರ್ಜಿ ಸಲ್ಲಿಸಬೇಕು.




bottom of page