top of page
  • Writer's pictureDoubleClickMedia

ರಾಯಚೂರು:ಜೆಸಿಬಿ ಹರಿದು ಮೂವರು ವಲಸೆ ಕಾರ್ಮಿಕರ ಸಾವು

ರಾಯಚೂರು, ಜೂನ್ 14,2023: ಹೊಲದ ಕಾಲುದಾರಿಯಲ್ಲಿ ಮಲಗಿದ್ದ ಮೂವರು ಕಾರ್ಮಿಕರ ಮೇಲೆ‌ ಜೆಸಿಬಿ ಹರಿದು ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ರಾತ್ರಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟವರು ಛತ್ತೀಸ್‌ಗಢ ರಾಜ್ಯದ ವಲಸೆ ಕಾರ್ಮಿಕರಾಗಿದ್ದು, ವಿಷ್ಣು (26), ಶಿವರಾಮ್(28), ಬಲರಾಮ್(30) ಮೃತಪಟ್ಟವರು ಎಂದು ಗುರುತಿಸಲಾಗಿದೆ.ನೀಲವಂಜಿ ಗ್ರಾಮದಲ್ಲಿ ರೈತ ಓರ್ವನ ಜಮೀನಿಗೆ ಬೋರವೆಲ್ ಕೊರೆಯಲು ಬೋರವೆಲ್ ವಾಹನದಲ್ಲಿ ಆಗಮಿಸಿದ್ದರು. ಬೋರವೆಲ್ ಕೆಲಸ ಮುಗಿದ ನಂತರದಲ್ಲಿ ರಾತ್ರಿಯ ವೇಳೆ ಹೊಲದಲ್ಲಿನ ಕಾಲುದಾರಿಯಲ್ಲಿ ಕಾರ್ಮಿಕರು ಮಲಗಿದ್ದು, ಬೋರವೆಲ್ ಕೊರೆಯುವ ಕೆಲಸ ಮಾಡಿದ್ದರಿಂದ ಗಾಢ ನಿದ್ರೆಯಲ್ಲಿದ್ದರು. ರಾತ್ರಿ ಹೊತ್ತಿನಲ್ಲಿ ಜೆಸಿಬಿ ಹೊಲದಲ್ಲಿ ಬಂದಿದ್ದು, ಕಾರ್ಮಿಕರ ಮೇಲೆ ಹರಿದು ಹೋಗಿರುವ ಪರಿಣಾಮ ಕಾರ್ಮಿಕರು ಸ್ಥಳದಲ್ಲೇ ಮೃತಟ್ಟಿದ್ದಾರೆ.


ಘಟನೆ ವಿಷಯ ತಿಳಿದ ದೇವದುರ್ಗ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತರ ಪೊಷಕರಿಗೆ ಮಾಹಿತಿ ನೀಡಲಾಗಿದೆ. ಅವರ ದೂರಿನ ಮೇರೆಗೆ ಮುಂದೆ ತನಿಖೆಯನ್ನು ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.Comentarios


bottom of page