top of page
  • Writer's pictureDoubleClickMedia

ಮಾರಿ ಮಾರಿ, ಮಾರಿಗೆ ದಾರಿ ಎನ್ನುತ ಆಗಸ್ಟ್​ 25 ರಂದು ತೆರೆ ಮೇಲೆ ಬರಲಿದೆ ರಾಜ್‌ ಬಿ ಶೆಟ್ಟಿ ಸಿನಿಮಾ


ತುಳುನಾಡಿನಿಂದ ಹೋಗಿ ಸ್ಯಾಂಡಲ್‌ವುಡ್‌ನಲ್ಲಿ ಹವಾ ಸೃಷ್ಟಿಸಿರುವ ನಟರಲ್ಲಿ ರಾಜ್‌ ಶೆಟ್ಟಿ ಕೂಡಾ ಒಬ್ಬರು. ಗರುಡ ಗಮನ ವೃಷಭ ವಾಹನದ ನಂತರ ರಾಜ್‌ ಬಿ ಶೆಟ್ಟಿ ಯಾವ ಸಿನಿಮಾ ತೆರೆ ಕಾಣಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ರಾಜ್‌ ಶೆಟ್ಟಿ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದು "ಟೋಬಿ" ಸಿನಿಮಾ ರಿಲೀಸ್‌ ಡೇಟ್ ಅನ್ನು ಘೋಷಣೆ ಮಾಡಿದ್ದಾರೆ.ಮಾರಿ ಮಾರಿ, ಮಾರಿಗೆ ದಾರಿ-ಟೋಬಿ ಎಂಬ ಟೈಟಲ್‌ನೊಂದಿಗೆ ಅಧಿಕೃತವಾಗಿ ಮೋಷನ್‌ ಪೊಸ್ಟರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ಆಗಸ್ಟ್​ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.


ಟೋಬಿ ಸಿನಿಮಾವನ್ನು ರಾಜ್‌ ಶೆಟ್ಟಿಯವರೇ ಬರೆದಿದ್ದು ಲೀಡ್‌ ರೋಲ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್​ ನಟಿಸಿದ್ದಾರೆ. ಲೈಟರ್​ ಬುದ್ಧ ಫಿಲ್ಮ್ಸ್​ಬ್ಯಾನರ್​ನಲ್ಲಿ ‘ಟೋಬಿ’ ಸಿನಿಮಾ ಸಿದ್ಧವಾಗುತ್ತಿದೆ. ‘ಅಗಸ್ತ್ಯ ಫಿಲ್ಮ್ಸ್​’ ಕೂಡ ಸಾಥ್​ ನೀಡಿದೆ.ಟೋಬಿ ಬಿಗ್‌ ಬಜೆಟ್ ಸಿನಿಮಾವಾಗಿದ್ದು ಇದಕ್ಕೆ ಬಾಸಿಲ್‌ ಅಲ್ಚಲಕ್ಕಲ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನು ಟೋಬಿ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್‌ ರಾಜ್ಯದಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗೆ ಮುಕುಂದನ್‌ ಸಂಗೀತ ನಿರ್ದೇಶನವಿದ್ದು, ಪ್ರವೀಣ್‌ ಶ್ರೀಯನ್‌ ಛಾಯಾಗ್ರಹಣವಿದೆ.


Comments


bottom of page