top of page
  • Writer's pictureDoubleClickMedia

ಮೀನುಗಾರಿಕಾ ಕಾಲೇಜಿನಲ್ಲಿ ಯೋಜನಾ ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಆಹ್ವಾನ

ಮಂಗಳೂರು,ಜೂ.26: ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿರುವ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಪ್ರಾಯೋಜಿತ ಯೋಜನೆಯಾದ ‘ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃಧ್ಧಿ ಕಾರ್ಯಕ್ರಮಗಳು’ ಎಂಬ ಶೀರ್ಷಿಕೆಯಡಿಯಲ್ಲಿ ತಾತ್ಕಾಲಿಕ ಆಧಾರದ ಮೇಲೆ ಸಹ ತರಬೇತುದಾರ, ತರಬೇತಿ ಸಹಾಯಕ (ತಾಂತ್ರಿಕ) ಮತ್ತು ಕೇರ್‍ಟೇಕರ್ ಕಂ. ಹೆಲ್ಪರ್ ಸಿಬ್ಬಂದಿಗಳನ್ನು ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ, ವಿದ್ಯಾರ್ಹತೆ, ಅನುಭವ, ಸಂದರ್ಶನ ಇತ್ಯಾದಿಗಳ ಮಾಹಿತಿಗಾಗಿ ಕಾಲೇಜಿನ ವೆಬ್‍ಸೈಟ್ www.cofm.edu.in ಮೂಲಕ ಲಾಗ್‍ಇನ್ ಆಗಬಹುದು.


ಹೆಚ್ಚಿನ ಮಾಹಿತಿಗೆ ಸಂಯೋಜಕರು ಕಂ. ಪ್ರಧಾನ ಸಂಶೋಧಕರ ಮೊಬೈಲ್ ಸಂಖ್ಯೆ: 9916924084, 8618660949ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕಾ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


bottom of page