top of page
  • Writer's pictureDoubleClickMedia

ಅರಶಿನಗುಂಡಿ ಜಲಪಾತಕ್ಕೆ ಬಿದ್ದಿದ್ದ ಶರತ್ ಮೃತದೇಹ ಪತ್ತೆ



ಉಡುಪಿ, ಜು 30: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿ ಮೂಲದ ಶರತ್ ಮೃತ ದೇಹ ಪತ್ತೆಯಾಗಿದೆ.



ಮಂಗಳೂರಿನ ಎಸ್​ಡಿಆರ್​ಎಫ್ ತಂಡದ ಹತ್ತು ಸಿಬ್ಬಂದಿ, ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ, ಜ್ಯೋತಿರಾಜ್ ತಂಡ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಸ್ಥಳೀಯರ‌ ಸತತ ಕಾರ್ಯಾಚರಣೆಯಿಂದಾಗಿ ಒಂದು ವಾರದ ಬಳಿಕ ಶರತ್​ ಮೃತದೇಹ ಇಂದು ಪತ್ತೆಯಾಗಿದೆ.



ಭದ್ರಾವತಿ ಮೂಲದ ಶರತ್​ ಸ್ನೇಹಿತರೊಂದಿಗೆ ಜುಲೈ 24 ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತ ನೋಡಲು ಬಂದಿದ್ದು, ಬಂಡೆಗಳ ಮೇಲೆ ನಿಂತು ರೀಲ್ಸ್​ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಎಷ್ಟು ಕಾರ್ಯಚರಣೆ ನಡೆಸಿದ್ದರೂ ಶರತ್ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಸತತ ಕಾರ್ಯಚರಣೆಯಿಂದ 200 ಮೀಟರ್ ಕೆಳಗಡೆ ಬಂಡೆಗಲ್ಲಿನ ಒಳಗಡೆ ಸಿಲುಕಿ ಹಾಕಿಕೊಂಡಿದ್ದ ಶರತ್ ಮೃತದೇಹ ಪತ್ತೆಯಾಗಿದ್ದು, ಇದೀಗ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.




bottom of page