top of page
  • Writer's pictureDoubleClickMedia

ಮಂಗಳೂರಿನಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್​ ಮಾರಾಟ: ಇಬ್ಬರ ಬಂಧನ


drug-laced chocolate

ಮಂಗಳೂರು, ಜು.21: ಮಾದಕವಸ್ತು ಮಿಶ್ರಿತ ಚಾಕೊಲೇಟ್‍ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಾಂಗ್ ಮಿಶ್ರಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್(45), ಹಾಗೂ ಮಂಗಳೂರಿನ ಮನೋಹರ್ ಶೇಟ್(49) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಂಗಳೂರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.



ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್ ನಗರದ ಹೈಲ್ಯಾಂಡ್​​​​ ಬಳಿಯ ಅಂಗಡಿಯಲ್ಲಿ ತನ್ನ ಗೂಡಂಗಡಿಯಲ್ಲಿ 5,500 ಮೌಲ್ಯದ “ಮಹಾಶಕ್ತಿ ಮುನಕ್ಕಾ”, “ಬಮ್ ಬಮ್ ಮುನಕ್ಕಾ ವಟಿ” “ಪಾವರ್ ಮುನಕ್ಕಾ ವಟಿ” ಹಾಗೂ “ಆನಂದ ಚೂರ್ಣ ಎಂದು ನಮೂದು ಇರುವ ಚಾಕೊಲೇಟ್​ಗಳಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ. ಇದನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಪತ್ತೆ ಹಚ್ಚಿದದಾರೆ.



ನಗರದ ಕಾರ್ ಸ್ಟ್ರೀಟ್ ಬಳಿ ಆರೋಪಿ ಮನೋಹರ್ ಶೇಟ್ ಸಹಿತ, ಮೂರು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಇಟ್ಟಿದ್ದ ಸುಮಾರು 48,000 ಮೌಲ್ಯದ ಚಾಕೋಲೇಟ್​ನ್ನ ಉತ್ತರ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಚಾಕೊಲೇಟ್​ಗಳನ್ನು ಲ್ಯಾಬ್​ಗೆ ಕಳುಹಿಸಿದ್ದಾರೆ.



Commenti


bottom of page