top of page
  • Writer's pictureDoubleClickMedia

ಶರಾವತಿ ಹಿನ್ನೀರಿನ ಮಟ್ಟ ಇಳಿಕೆ : ಇಂದಿನಿಂದ ಸಿಂಗದೂರು ಲಾಂಚ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ


Sigandhur Ferry

ಶಿವಮೊಗ್ಗ ಜೂನ್‌ 14, 2023 : ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿ ಶರಾವರಿ ಹಿನ್ನಿರಿನ ಮಟ್ಟ ಇಳಿಕೆಯಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಜೂನ್​ 14ರಿಂದ ಸಿಗಂದೂರು ಲಾಂಚ್​ನಲ್ಲಿ ಬಸ್​, ಕಾರು ಸೇರಿದಂತೆ ಇತರೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತಿದೆ.


ಲಾಂಚ್‌ನಲ್ಲಿ ಎಂದಿನಂತೆ ವಾಹನಗಳನ್ನು ಸಾಗಣೆ ಮಾಡಿದರೆ ಹಿನ್ನೀರಿನ ದಡದ ಕೆಸರಿನಲ್ಲಿ ಲಾಂಚ್​ ಸಿಕ್ಕಿ ಬೀಳ್ಳುವ ಸಾಧ್ಯತೆ ಇದೆ. ಹಾಗಾಗಿ ಜನರನ್ನು ಮಾತ್ರ ಲಾಂಚ್​ಗೆ ಹತ್ತಿಸಲು ನಿರ್ಧರಿಸಲಾಗಿದೆ. ಮುಂಗಾರು ಮಳೆ ಆರಂಭವಾಗದಿದ್ದರೆ ಲಾಂಚ್​​ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಸಾಧ್ಯತೆಗಳು ಇದ್ದು, ಸ್ಥಳೀಯರ ಸಂಚಾರಕ್ಕೆ ತೊಂದರೆಯಾಗದಂತೆ ಸಣ್ಣ ಲಾಂಚ್​ ಮತ್ತು ಬೋಟ್​​ ವ್ಯವಸ್ಥೆ ಮಾಡಲಾಗಿದೆ.ಸ್ಥಳೀಯರಿಗೆ ಆರೋಗ್ಯ ಸಂಬಂಧಿ ಸೇವೆಯೂ ಸೇರಿದಂತೆ ಯಾವುದೇ ತುರ್ತು ಸೇವೆಯ ವಾಹನಗಳನ್ನೂ ಕೂಡ ಲಾಂಚ್‌ನಲ್ಲಿ ಹಾಕಲು ಅವಕಾಶವಿಲ್ಲದ್ದರಿಂದ ತುರ್ತು ಸೇವೆಗಾಗಿ 100 ಕಿಲೋಮೀಟರ್‌ ಕ್ರಮಿಸಿ ಸಾಗರ ತಲುಪುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ.


ಪ್ರವಾಸಿಗರಿಗೂ ತೊಂದರೆಯಾಗಲಿದ್ದು, ಸಿಗಂದೂರಿಗೆ ಬರುವ ಭಕ್ತರು ತಮ್ಮ ವಾಹನಗಳನ್ನು ಅಂಬಾರಗೋಡ್ಲಿನಲ್ಲಿ ನಿಲ್ಲಿಸಬೇಕಿದೆ. ದಡದಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗಲಿದ್ದು, ಜನದಟ್ಟಣೆಯಿಂದಾಗಿ ಲಾಂಚ್‌ನಲ್ಲಿ ನೂಕುನುಗ್ಗಲು ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ, ಪ್ಲಾಟ್‌ ಫಾರಂ ಕೆಸರಾಗಿದ್ದು, ಜಾಗ್ರತೆಯಿಂದ ಪ್ರವಾಸಿಗರು ಪ್ರಯಾಣಿಸಬೇಕಾಗಿದೆ.
bottom of page