top of page
  • Writer's pictureDoubleClickMedia

ಎಣ್ಣೆ ಪ್ರಿಯರಿಗೆ ಶಾಕ್‌: ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟು ಏರಿಕೆ


Alcohol

ಬೆಂಗಳೂರು, ಜುಲೈ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ್ದ ಬಜೆಟ್​​ನಲ್ಲಿ ಮದ್ಯದ ಮೇಲೆ ಅಬಕಾರಿ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಳ ಮಾಡಿದ್ದು, ಬಿಯರ್ ಮೇಲೆ ಶೇ 10ರಷ್ಟು ಹೆಚ್ಚಿಸಿದ್ದು ಗುರುವಾರ ಜಾರಿಗೆ ಬಂದಿದೆ.ಭಾರತದಲ್ಲಿ ತಯಾರಾಗುವ ವಿದೇಶಿ ಬ್ರಾಂಡ್​​ ಮದ್ಯಕ್ಕೆ ಸಂಬಂಧಿಸಿದ ಎಲ್ಲಾ 18 ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 20 ರಷ್ಟು ಹೆಚ್ಚಿಸುವುದಾಗಿ ಬಜೆಟ್​​​ನಲ್ಲಿ ಘೋಷಿಸಲಾಗಿತ್ತು. ಇದಲ್ಲದೇ ರಾಜ್ಯದಲ್ಲಿ ಬಿಯರ್ ಮೇಲಿನ ಸುಂಕ ಶೇ 10ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ್ದರು.ಇನ್ಮುಂದೆ ದುಬಾರಿಯಾಗಲಿದೆ ಈ ಮದ್ಯಗಳು:

ಬಿಯರ್- ಸದ್ಯದ ದರ 230ರೂ. ಇದ್ದು 253 ರೂ. ಆಗಬಹುದು

ರಾಯಲ್ ಸ್ಟಾಗ್ 450 ರೂ. ಇದ್ದು 500. ರೂ ಆಗಬಹುದು

Imperial blue-300 ರೂ. ಇದ್ದು 360 ರೂ. ಆಗಬಹುದು

ರಾಯಲ್ ಚ್ಯಾಲೆಂಜ್- ಸದ್ಯದ ದರ 450 ರೂ ಇದ್ದು 500 ರೂ. ಆಗಬಹುದು

Mc ವಿಸ್ಕಿ-300 ರೂ. ಇದ್ದು 360 ರೂ ಆಗಬಹುದು

ಬ್ರಾಂಡಿ- mansion house-300‌ ರೂ. ಇದ್ದು 350 ರೂ. ಆಗಬಹುದು

ವೋಡ್ಕಾ- 300 ರೂ. ಇದ್ದು 350 ರೂ. ಆಗಬಹುದು

Black dog full-3360 ರೂ. ಇದ್ದು 4000 ರೂ. ಆಗಬಹುದು

Vat69-3300 ಇದ್ದು ರೂ. 4000 ರೂ. ಆಗಬಹುದು
Comments


bottom of page