DoubleClickMedia
ಚಿಕ್ಕಮಗಳೂರು: ಕಾಫಿ ಎಸ್ಟೇಟ್ ಮ್ಯಾನೇಜರ್ ಅನುಮಾನಾಸ್ಪದ ಸಾವು

ಚಿಕ್ಕಮಗಳೂರು, ಆಗಸ್ಟ್ 17: ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾನ್ಗುಡ್ಡ ಕಾಫಿ ಎಸ್ಟೇಟ್ ಮ್ಯಾನೇಜರ್ ಶವವಾಗಿ ಪತ್ತೆಯಾಗಿದ್ದಾರೆ.
ಕಾಫಿ ಎಸ್ಟೇಟ್ ಮ್ಯಾನೇಜರ್ ಕಾಶಿ ಬೊಪ್ಪಯ್ಯ(59) ಶವ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನ ನಿರ್ಜನ ಪ್ರದೇಶದ ಕೆರೆಯೊಂದರಲ್ಲಿ ಪತ್ತೆಯಾಗಿದೆ.
ಕೆರೆಯ ಬಳಿ ಕಾಶಿ ಬೊಪ್ಪಯ್ಯ ಚಪ್ಪಲಿ ,ಪರ್ಸ್ ಪತ್ತೆ ಜೀಪ್ ಇದ್ದು, ಇದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಕೊಲೆ ಮಾಡಿ ಕೆರೆಗೆ ಎಸೆದಿದ್ದಾರೆ ಎಂದು ಕಾಶಿ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು ಸಮೀಪದ ಟಿ. ಶೆಟ್ಟಿಗೇರಿ ಗ್ರಾಮದವರಾದ ಕಾಶಿ ಬೊಪ್ಪಯ್ಯ. ಕಳೆದ ಮೂರು ವರ್ಷಗಳಿಂದ ಬಾಳೆಹೊನ್ನೂರು ಸಮೀಪದ ಖಾನ್ಗುಡ್ಡ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು.