top of page
  • Writer's pictureDoubleClickMedia

ಪಿಆರ್​ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಆಚಾರ್ & ಕೋ’ ಸಿನಿಮಾ ಜುಲೈ 28ಕ್ಕೆ ರಿಲೀಸ್‌


anchar and co

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಆಚಾರ್ ಅಂಡ್ ಕೋ' ಬಿಡುಗಡೆಗೆ ಸಜ್ಜಾಗಿದೆ. ಸಿಂಧು ಶ್ರೀನಿವಾಸಮೂರ್ತಿ ಅವರ ಚೊಚ್ಚಲ ನಿರ್ದೇಶನದ ‘ಆಚಾರ್ & ಕೋ’ ಚಿತ್ರ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಇದೇ ಜುಲೈ 28ರಂದು ಬಿಡುಗಡೆಯಾಗಲಿದೆ.ಸಂಪೂರ್ಣವಾಗಿ ಮಹಿಳೆಯರೇ ಸೇರಿ ಮಾಡಿರುವ ಸಿನಿಮಾ ಇದಾಗಿದ್ದು, ಬಿಂಧುಮಾಲಿನಿ ನಾರಾಯಣಸ್ವಾಮಿ ಸಂಗೀತ ಸಂಯೋಜಿಸಿದ್ದಾರೆ. ಡ್ಯಾನಿಲ್ಲಾ ಕೊರೆಯಾ ಕ್ರಿಯೇಟಿವ್ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ಇಂಚರ ಸುರೇಶ್ ವಸ್ತ್ರವಿನ್ಯಾಸ, ಹೇಮಾ ಸುವರ್ಣ ಧ್ವನಿ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣವಿದೆ. ಸದ್ಯಕ್ಕೆ ಆಚಾರ್ & ಕೋ’ ಸಿನಿಮಾ ಪೋಸ್ಟರ್​ನಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಹಾಡುಗಳು ಮತ್ತು ಟ್ರೇಲರ್​ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.


‘ರೆಟ್ರೋ ಶೈಲಿಯ ಈ ಸಿನಿಮಾದ ಕಥೆ 1960ರ ಕಾಲಘಟ್ಟದ ಬೆಂಗಳೂರಿನಲ್ಲಿ ಸಾಗುತ್ತದೆ. ಆಗಿನ ಕಾಲದ ಒಂದು ಕುಟುಂಬಕ್ಕೆ ಎದುರಾಗುವ ಸಂಪ್ರದಾಯ ವರ್ಸಸ್​ ಆಧುನಿಕತೆ ಎಂಬ ವಾತಾವರಣದ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಸೂಕ್ತ ವಸ್ತ್ರ ವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60 ಮತ್ತು 70 ರ ದಶಕದ ಬೆಂಗಳೂರನ್ನು ತೆರೆ ಮೇಲೆ ಸಮರ್ಥವಾಗಿ ಮರುಸೃಷ್ಟಿ ಮಾಡಲಾಗಿದೆ.ಈ ಸಿನಿಮಾದ ಬಿಡುಗಡೆ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಮಾತನಾಡಿದ್ದಾರೆ. ‘ಎಲ್ಲಾ ವರ್ಗದ ಪ್ರೇಕ್ಷಕರಿಗೆ ಕನೆಕ್ಟ್​ ಆಗುವಂತಹ ಕಥೆ ಈ ಸಿನಿಮಾದಲ್ಲಿದೆ. ಈ ರೀತಿಯ ವಿಶೇಷ ಸಿನಿಮಾವನ್ನು ನಿರ್ಮಾಣ ಮಾಡಿದ್ದಕ್ಕೆ ಖುಷಿ ಇದೆ. ನೂತನ ಬಗೆಯ ಕಥೆಗಳಿಗೆ ವೇದಿಕೆ ಕಲ್ಪಿಸುತ್ತೇವೆ ಎಂಬ ನಮ್ಮ ಬದ್ಧತೆಯನ್ನು ಈ ಸಿನಿಮಾ ಕೂಡ ಮುಂದುವರಿಸಿಕೊಂಡು ಹೋಗುತ್ತಿದೆ. ಪ್ರತಿಭಾವಂತ ಮಹಿಳಾ ತಂತ್ರಜ್ಞರನ್ನು ಪ್ರೋತ್ಸಾಹಿಸುವ ಮೂಲಕ ಈ ಸಿನಿಮಾ ನಮಗೆ ಹಾಗೂ ಚಿತ್ರರಂಗಕ್ಕೆ ಸ್ಮರಣೀಯವಾಗಲಿದೆ’ ಎಂದು ಅವರು ಹೇಳಿದ್ದಾರೆ.تعليقات


bottom of page