top of page
  • Writer's pictureDoubleClickMedia

ಪಿಲಿಕುಳದಲ್ಲಿ ಹುಲಿಗಳ ಕಾದಾಟ : ಹೆಣ್ಣು ಹುಲಿ ಮೃತ್ಯು


TigersFighting
ಸಾಂದರ್ಭಿಕ ಚಿತ್ರ

ಮಂಗಳೂರು ಜೂನ್‌ 07, 2023: ಎರಡು ಹುಲಿಗಳ ನಡುವೆ ಕಾದಾಟ ನಡೆದು ಗಾಯಗೊಂಡಿದ್ದ ಹೆಣ್ಣು ಹುಲಿ ಸಾವನ್ನಪ್ಪಿರುವ ಘಟನೆ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ನಡೆದಿದೆ.


15 ವರ್ಷದ ನೇತ್ರಾವತಿ ಎಂಬ ಹೆಸರಿನ ಹೆಣ್ಣು ಹುಲಿ ಮೃತಪಟ್ಟಿದ್ದು, ಜೂ. 4ರಂದು ಆರು ವರ್ಷದ ಗುಂಡು ಹುಲಿ ರೇವಾ ಮತ್ತು ನೇತ್ರಾವತಿ ಮಧ್ಯೆ ನಡೆದ ಕಾದಾಟದಲ್ಲಿ ನೇತ್ರಾವತಿ ಗಾಯಗೊಂಡಿತ್ತು. ಈ ವೇಳೆ ಗಾಯಗೊಂಡಿದ್ದ ಹುಲಿಗೆ ವೈದ್ಯರು ಚಿಕಿತ್ಸೆ ನೀಡಿದ್ದರು ಆದರೆ ಚಿಕಿತ್ಸೆ ಫಲಿಸದೇ ನೇತ್ರಾವತಿ ಇಂದು ಬೆಳಗ್ಗೆ ಸಾವನ್ನಪ್ಪಿದೆ ಎಂದು ಪಿಲಿಕುಳ ಕೇಂದ್ರದ ನಿರ್ದೇಶಕ ಹೆಚ್​. ಜೆ. ಭಂಡಾರಿ ಅವರು ತಿಳಿಸಿದ್ದಾರೆ.


ಬೆದೆಗೆ ಬಂದ ರೇವಾ ಎಂಬ ಗಂಡು ಹುಲಿಯು ನೇತ್ರಾವತಿಯ ಸಂಪರ್ಕಕ್ಕೆ ಬಂದಾಗ ನೇತ್ರಾವತಿಯು ಅದರ ಮೇಲೆರಗಿತ್ತು. ಇಬ್ಬರ ಮಧ್ಯೆ ಕಾದಾಟ ನಡೆದು ನೇತ್ರಾವತಿ ಗಾಯಗೊಂಡಿತ್ತು.ಪಿಲಿಕುಲದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದು, ನೇತ್ರಾವತಿ ಚೇತರಿಕೆ ಕಂಡಿತ್ತು. ನೀರು ಮತ್ತು ಆಹಾರ ಸೇವಿಸುತಿತ್ತು. ಆದರೆ ಇಂದು ಬೆಳಗ್ಗೆ ವೈದ್ಯಾಧಿಕಾರಿ ಚಿಕಿತ್ಸೆ ನೀಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದೆ ಎಂದು ಭಂಡಾರಿ ತಿಳಿಸಿದ್ದಾರೆ.


ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಶಂಕೆಯಿದ್ದು ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಜ ಕಾರಣ ತಿಳಿಯಬೇಕಿದೆ ಎಂದು ಭಂಡಾರಿ ಹೇಳಿದ್ದಾರೆ.Comments


bottom of page