top of page
  • Writer's pictureDoubleClickMedia

ನಂತೂರಿನಲ್ಲಿ ಸಾಮಾಜಿಕ ಕಾಳಜಿ ಮೆರೆದ ಟ್ರಾಫಿಕ್ ಪೋಲೀಸ್: ವೀಡಿಯೋ ವೈರಲ್



ಮಂಗಳೂರು, ಜೂ.19, 2023: ಮಂಗಳೂರಿನ ನಂತೂರು ಜಂಕ್ಷನ್‌ನಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸರೊಬ್ಬರು ರಸ್ತೆಯಲ್ಲಿ ಚೆಲ್ಲಿದ್ದ ಎಣ್ಣೆಗೆ ಮಣ್ಣು ಸುರಿಯುವ‌ ಮೂಲಕ ವಾಹನಗಳು ಸ್ಕಿಡ್ ಆಗುವುದನ್ನು ತಪ್ಪಿಸಿ ಸಾಮಾಜಿಕ‌ ಕಾಳಜಿ‌ ಮೆರೆದಿದ್ದಾರೆ. ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರಸ್ತೆಯಲ್ಲಿ ಸುರಿದ ಎಣ್ಣೆಗೆ ಟ್ರಾಫಿಕ್ ಪೋಲೀಸ್ ತನ್ನ ಕೈಗಳಿಂದ ಮಣ್ಣು ಹಾಕುತ್ತಿರುವುದನ್ನು ಇದರಲ್ಲಿ ಕಾಣಬಹುದು.

Traffic Police at work

ಜೇಮ್ಸ್ ಹೆಸರಿನ ಟ್ವಿಟರ್ ಖಾತೆಯಿಂದ ಈ ಕುರಿತು ಟ್ವೀಟ್ ಮಾಡಲಾಗಿದೆ. ಈ ಘಟನೆ ಜೂನ್ 17 ರಂದು ಮಧ್ಯಾಹ್ನ 12.50 ಕ್ಕೆ ನಡೆದಿದೆ. ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಹನುಮಂತಪ್ಪ ನಾಯ್ಕರ್ ಎಂಬುವವರು ಕೈತುಂಬ ಮಣ್ಣನ್ನು ತೆಗೆದುಕೊಂಡು ತೈಲ ಸೋರಿಕೆಯಾದ ಸ್ಥಳಕ್ಕೆ ಹೋಗಿ ಅದರ ಮೇಲೆ ಮಣ್ಣನ್ನು ಹಾಕುತ್ತಿದ್ದರು ಮತ್ತು ಹಿಂತಿರುಗಿ ವಾಹನದ ಸಂಚಾರವನ್ನು ಸಹ ನಿರ್ವಹಿಸುತ್ತಿದ್ದರು.




ಶನಿವಾರ ಮಳೆಯಾಗುತ್ತಿದ್ದರಿಂದ ರಸ್ತೆಯ ಮೇಲಿದ್ದ ತೈಲದಿಂದಾಗಿ ವಾಹನಗಳು ಅದರಲ್ಲೂ ದ್ವಿಚಕ್ರ ವಾಹನಗಳು ಸ್ಕಿಡ್ ಆಗುವ ಎಲ್ಲ ಸಾಧ್ಯತೆಯೂ ಇತ್ತು. ಆದ್ದರಿಂದ ಅಂತಹ ಅಪಾಯವನ್ನು ತಪ್ಪಿಸಲು, ಹನುಮಂತಪ್ಪ ನಾಯ್ಕರ್ ಎಣ್ಣೆಯ ಮೇಲೆ ಮಣ್ಣನ್ನು ಹಾಕಿದರು.



ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇಂತಹ ಉತ್ತಮ ಕೆಲಸಗಳನ್ನು ಗುರುತಿಸುವುದರಿಂದ ಸಾರ್ವಜನಿಕರ ಸೇವೆಯನ್ನು ಸುಧಾರಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

bottom of page