DoubleClickMedia
ಮಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ಕತ್ತಿ ಝಳಪಿಸಿದ ಇಬ್ಬರ ಬಂಧನ

ಮಂಗಳೂರು: ಚಲಿಸುತ್ತಿರುವ ರೈಲಿನೊಳಗೆ ಕತ್ತಿ ಝಳಪಿಸಿದ ಇಬ್ಬರನ್ನು ಕರ್ನಾಟಕದ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗೋವಾದಿಂದ ತಮಿಳುನಾಡಿನ ತಿರುನಲ್ವೇಲಿಗೆ ಪ್ರಯಾಣಿಸುತ್ತಿದ್ದ ಜಯಪ್ರಭು ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಮಿಳುನಾಡು ಮೂಲದವರಾಗಿದ್ದಾರೆ. ಜೂನ್ 30, ಶುಕ್ರವಾರದಂದು ತಿರುನಲ್ವೇಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್(ಗಾಡಿ ಸಂಖ್ಯೆ ೨೨೬೨೯) ಸುರತ್ಕಲ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ತೋಕೂರುಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿದ್ದಈ ಇಬ್ಬರು ವ್ಯಕ್ತಿಗಳು ಕತ್ತಿಗಳನ್ನು ತೆಗೆದುಕೊಂಡು ಸಹ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದರು. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಪ್ರಾಣಭಯದಿಂದ ಕೋಚ್‌ನಿಂದ ಹೊರಗೆ ಓಡಿ ಬಂದಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಧಾವಿಸಿದ ಟಿಟಿಇ ಬಾಬು ಕೆ, ಶ್ರೀ ನಿವಾಸ್ ಶೆಟ್ಟಿ ಮತ್ತು ತಿಮ್ಮಪ್ಪ ಗೌಡ ಅವರ ಕೈಯಿಂದ ಕತ್ತಿಗಳನ್ನು ಕಸಿದುಕೊಂಡು, ಹಿಡಿದಿಟ್ಟುಕೊಂಡಿದ್ದರು. ನಂತರ ಮಂಗಳೂರು ರೈಲು ನಿಲ್ದಾಣದಲ್ಲಿ ಅವರನ್ನು ಪೋಲಿಸರಿಗೆ ಒಪ್ಪಿಸಿದ್ದರು. ಘಟನೆಯಿಂದಾಗಿ ಹಲವು ಸೀಟುಗಳು ಮತ್ತು ಕಿಟಕಿಗಳಿಗೆ ಹಾನಿಯಾಗಿದೆ