top of page
  • Writer's pictureDoubleClickMedia

ವೈರಲ್‌ ವೀಡಿಯೊ, ವಿದೇಶಿ ಯುಟ್ಯೂಬರ್‌ ಮೇಲೆ ಹಲ್ಲೆ: ಬೆಂಗಳೂರಿನ ವ್ಯಾಪಾರಿ ಆರೆಸ್ಟ್‌

ಬೆಂಗಳೂರು ಜೂ.12: ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನೆದರ್​ಲ್ಯಾಂಡ್​ ಮೂಲದ ಯೂಟ್ಯೂಬರ್ ​ ಮೇಲೆ ಹಲ್ಲೆ ಮಾಡಿದ ಸ್ಥಳೀಯ ವ್ಯಾಪಾರಿಯನ್ನು ಬಂಧಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 92ರ ಪ್ರಕಾರ ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ವ್ಯಾಪಾರಿ ನವಾಬ್ ಹಯಾತ್ ಶರೀಫ್ ಎಂದು ಗುರುತಿಸಲಾಗಿದೆ.


ಕರ್ನಾಟಕ ಪ್ರವಾಸದಲ್ಲಿರುವ ಪೆಡ್ರೊ ಮೋಟಾ ಯೂಟ್ಯೂಬರ್​ ತಮ್ಮ ಚಾನೆಲ್​ ಮೂಲಕ ಭಾರತ, ಭಾರತದ ಸಂಸ್ಕೃತಿ ಬಗ್ಗೆ ಪಾಶ್ಷಿಮಾತ್ಯ ರಾಷ್ಟ್ರಗಳಿಗೆ ಪರಿಚಯ ಮಾಡಿಕೊಡುತ್ತಿದ್ದಾರೆ. ಆದರೆ ಚಿಕ್ಕಪೇಟೆಯ ಜನ ನಿಬಿಡ ಪ್ರದೇಶದಲ್ಲಿ ವ್ಲಾಗ್ ಮಾಡಿಕೊಂಡು ಹೋಗುವಾಗ ಸ್ಥಳೀಯ ವ್ಯಾಪಾರಿಯೊಬ್ಬ ಪೆಡ್ರೋ ಕೈ ಹಿಡಿದು ಎಳೆದಾಡಿದ್ದಾನೆ.


ಪೆಡ್ರೋ ಮೋಟಾ ಮಾರುಕಟ್ಟೆಯ ಒಳಗೆ ಸೆಲ್ಫಿ ವೀಡಿಯೋ ಶೂಟಿಂಗ್ ಮಾಡುತ್ತಾ ಹೋಗುತ್ತಿದ್ದ ಸಂದರ್ಭ ವ್ಯಾಪಾರಿಯು ಇದಕ್ಕೆ ಆಕ್ಷೇಪಿಸಿದ್ದಾನೆ. ತಕ್ಷಣವೇ ಯೂಟ್ಯೂಬರ್ ನಮಸ್ತೆ ಎಂದು ತಿಳಿಸಿದ್ದಾನೆ. ಅದಕ್ಕೆ ವ್ಯಾಪಾರಿ ಏನು ನಮಸ್ತೆ ಎಂದು ಆತನ ಕೈ ಹಿಡಿದು ಎಳೆದುಕೊಂಡು ಹೋಗಿದ್ದಾನೆ. ಆತ ಕೈಬಿಡುವಂತೆ ಗೌರವಯುತವಾಗಿ ಕೇಳಿಕೊಂಡರೂ ಕೈಯ್ಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹಲ್ಲೆಗೆ ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಆತನಿಂದ ಕೈಯನ್ನು ಬಿಡಿಸಿಕೊಂಡ ಪೆಡ್ರೋ ತಕ್ಷಣವೇ ಆ ಸ್ಥಳದಿಂದ ತೆರಳಿದ್ದಾನೆ . ಈ ದೃಶ್ಯಗಳೆಲ್ಲವೂ ಯೂ ಟ್ಯೂಬರ್ ನ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇಂತಹ ಘಟನೆ ದೇಶದಲ್ಲಿ ಇದೇ ಮೊದಲಲ್ಲ, 2022ರ ಡಿಸೆಂಬರ್ ನಲ್ಲಿ ಮುಂಬೈನ ಬೀದಿಯಲ್ಲಿ ನಡೆದುಕೊಂಡು ಸೆಲ್ಫಿ ವೀಡಿಯೋ ಸ್ಟ್ರೀಮ್ ಮಾಡುತ್ತಿದ್ದ ಕೊರಿಯಾದ ಯೂ ಟ್ಯೂಬರ್ ಒಬ್ಬನಿಗೆ ಇಬ್ಬರು ಕಿರುಕುಳ ನೀಡಿದ್ದರು. ವಿಷಯ ಗಮನಕ್ಕೆ ಬಂದ ತಕ್ಷಣವೇ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದರು.ಅವರ ವಿರುದ್ಧ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.


bottom of page