top of page
  • Writer's pictureDoubleClickMedia

ಸ್ಯಾಂಡಲ್‌ವುಡ್‌ ನಲ್ಲಿ ಮದುವೆ ಸಂಭ್ರಮ: ಹಸೆಮಣೆ ಏರಲಿದ್ದಾರೆ ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ


Harshika Poonachha-Bhuvan Ponnanna

ಸ್ಯಾಂಡಲ್‌ವುಡ್‌ ನಲ್ಲಿ ಮತ್ತೆ ಮದುವೆ ಸಂಭ್ರಮ ಶುರುವಾಗಿದೆ. ನಟಿ ಹರ್ಷಿಕಾ ಪೂಣಚ್ಚ ಬಹು ದಿನದ ಗೆಳೆಯ ನಟ ಭುವನ್ ಪೊನ್ನಣ್ಣ ಅವರೊಂದಿಗೆ ಹಸೆಮಣೆ ಏರಲಿದ್ದಾರೆ.


ಕೊಡಗಿನವರೇ ಆಗಿರುವ ಹರ್ಷಿಕಾ ಪೂಣಚ್ಚ ಹಾಗೂ ಭುವನ್​ ಪೊನ್ನಣ್ಣ ಜೋಡಿ ತಮ್ಮ ಹುಟ್ಟೂರಿನಲ್ಲೇ ಆಗಸ್ಟ್ 24ರಂದು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.ವಿರಾಜಪೇಟೆಯ ಅಮ್ಮತ್ತಿಯಲ್ಲಿ ಈ ಸ್ಟಾರ್​ ಜೋಡಿಯ ಮದುವೆ ನಡೆಯಲಿದೆ. ಇಬ್ಬರ ವಿವಾಹದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೊಡವ ಭಾಷೆಯಲ್ಲಿ ಮಂಗಳ ಪತ್ರ ಮುದ್ರಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಆಮಂತ್ರಣ ಪತ್ರಿಕೆಯ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದೆ ಎನ್ನಲಾಗುತ್ತಿದೆ.


ಇನ್ನು ಕೊಡವ ಸಂಪ್ರದಾಯದ ಪ್ರಕಾರ ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ಮದುವೆ ಕಾರ್ಯಗಳು ನಡೆಯಲಿವೆ. ಈ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ಕುಟುಂಬಸ್ಥರು ಮತ್ತು ಆಪ್ತರು ಪಾಲ್ಗೊಳ್ಳಲಿದ್ದಾರೆ.ಭುವನ್ ಮತ್ತು ಹರ್ಷಿಕಾ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೊಡಗಿನಲ್ಲಿ ಪ್ರವಾಹ ಬಂದಾಗ, ಕೊರೊನಾ ಸಂಕಷ್ಟದ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದರು.


ಇನ್ನು 2008ರಲ್ಲಿ ಹರ್ಷಿಕಾ ಪೂಣ್ಣಚ್ಚ ಅವರು ಚಿತ್ರರಂಗಕ್ಕೆ ಕಾಲಿಟ್ಟ ಈವರೆಗೂ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತಮಿಳು, ಭೋಜ್​ಪುರಿ, ತೆಲುಗು, ಕೊಡವ ಮತ್ತು ಕೊಂಕಣಿ ಭಾಷೆಯ ಸಿನಿಮಾಗಳಲ್ಲಿ ಮಿಂಚಿದ್ದಾರೆ. 2010ರಲ್ಲಿ ಸಿನಿಮಾ ರಿಲೀಸ್ ಆದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಮೂಲಕ ಮೊದಲ ಬಾರಿಗೆ ಭುವನ್ ಪೊನ್ನಣ್ಣ ತೆರೆಮೇಲೆ ಮಿಂಚಿದರು. ಕೂಲ್ ಸಖತ್ ಹಾಟ್ ಮಗ, ಕುಚಿಕು ಕುಚಿಕು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರಾಂದವ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದರು.Comments


bottom of page